ಕಾನೂನಿನ ಭಯೋತ್ಪಾದನೆ - ಪುರುಷರ ಸಮರ
ಈ ಚಿತ್ರದಲ್ಲಿ ಕಂಡ ಹಾಗೆ ಈ ದಿನ ಭಾರತದ ವ್ಯವಸ್ಥೆ ಪುರುಷರನ್ನು ಬಲಿ ಪಶುಗಳನ್ನಾಗಿ ಮಾಡಿದೆ. ಜಗತ್ತಿನಲ್ಲಿ ಅತೀ ಹೆಚ್ಚು ಯುವಕರ ಸಂಖ್ಯೆ ಭಾರತದಲ್ಲಿದೆ. ಯುವಕರು ಹಿಂದೆಂದಿಗಿಂತಲೂ ಹೆಚ್ಚು ದುಡಿದು ಭಾರತದ ಏಳಿಗೆಗೆ ಬಾಗಿಯಾಗುತಿದ್ದಾರೆ.
ಆದರೆ ಈ ಏಳಿಗೆಯನ್ನು ಸಹಿಸಲಾಗದ ದುಷ್ಟ ಶಕ್ತಿಗಳು ಭಾರತದ ಒಳಗೆ ಇರುವ ಕೆಲವು ದುಷ್ಟ ಕೂಟಗಳೊಡನೆ ಸೇರಿ ಐ ಪಿ ಸಿ 498A ಹಾಗು ಕೌಟುಂಬಿಕ ಕಿರುಕುಳ ಕಾನೂನು ಎಂಬ ಬೇಧ ಪೂರಿತ ಹಾಗು ದ್ವೇಷ ಪೂರಿತ ಕಾನೂನುಗಳನ್ನು ಚಾಲನೆಗೆ ತಂದು ಭಾರತದ ಕುಟುಂಬ ವ್ಯವಸ್ಥೆಯನ್ನೇ ಒಡೆಯಲು ಆರಂಭಿಸಿದೆ.ಕೆಲವು ಓದುಗರಿಗೆ ಇದು ಉತ್ಪ್ರೇಕ್ಷೆ ಎನ್ನಿಸಬಹುದು. ಆದರೆ ಈ ಕಾಯ್ದೆಯ ದುರುಪಯೋಗದಿಂದ ನರಳುತಿರುವ ಜನರಿಗೆ ಗೊತ್ತು ಇದು ಎಂತಹ ಮನೆಹಾಳು ಕಾನೂನು ಅಂತ. ಈ ಕಾನೂನುಗಳ ಅಡಿ ಒಂದು ಮಹಿಳೆ ಪೋಲಿಸ್ ಠಾಣೆಗೆ ಹೋಗಿ ಅವಳ ಪತಿಯ ಹಾಗು ಪತಿಯ ಕಡೆಯವರ ಮೇಲೆ ಒಂದು ಸಾಲು ಕಂಪ್ಲೇಂಟ್ ಕೊಟ್ಟರೆ ಸಾಕು ಪೊಲೀಸರು ಪತಿ ಹಾಗು ಅವನ ಸಂಬಂದಿಕರನ್ನು ವಿಚಾರಣೆಗೆ ತೆಗೆದು ಕೊಂಡು ಕೂಡಲೇ ಬಂದಿಸಬಹುದು. ಒಂದು ಬಾರಿ ಪೋಲಿಸ್ ಸ್ಟೇಷನ್ ಮೆಟ್ಟಲಿಗೆ ಕಂಪ್ಲೇಂಟ್ ಹೋದರೆ ಸಾಕು ಪುರುಷನಿಗೆ ಶುರುವಾಗುತ್ತದೆ ಕಿರುಕುಳಗಳ ಸರಮಾಲೆ. ಪೊಲೀಸರು ತಾವು ಯಾವಾಗ ಬೇಕಿದ್ದರೂ ಬಂದಿಸಬಹುದು ಅಂತ ಹೆದರಿಸಿ ಲಂಚ ಕೇಳುತ್ತಾರೆ, B ರಿಪೋರ್ಟ್ ಹಾಕ್ತೀವಿ ಅಂತ ಲಂಚ ಕೇಳ್ತಾರೆ ಇನ್ನೊಂದು ಕಡೆ ವಕೀಲರು ಪುರುಷ ಹಾಗು ಅವನ ಕಡೆಯವರೆಲ್ಲರ ಮೇಲೆ ಇಲ್ಲ ಸಲ್ಲದ ಕತೆಯನ್ನು ಸೃಷ್ಟಿ ಮಾಡಿ ಪುರುಷನು ನಿರೀಕ್ಷಣ ಜಾಮೀನು ತೆಗೆದು ಕೊಳ್ಳಬೇಕಾದರೆ ತಾನು ಹಾಗು ಅವನ ಕುಟುಂಬದವರೆಲ್ಲರ ಹೆಸರಿನಲ್ಲು ಜಾಮೀನು ತೆಗೆದುಕೊಳ್ಳ ಬೇಕಾಗುತ್ತದೆ . ಸೆಶನ್ ಕೋರ್ಟಿನಲ್ಲಿ ಜಾಮೀನು ಅರ್ಜಿ ತಿರಸ್ಕ್ರುತವಾದಲ್ಲಿ ಹೈಕೋರ್ಟ್ ಮೊರೆ ಹೋಗಬೇಕಾಗುತ್ತದೆ …ಇದೆಲ್ಲರ ಕರ್ಚು ಕೆಲವು ಲಕ್ಷದ ಹತ್ತಿರ ಬರುತ್ತದೆ.
ಇಷ್ಟಕ್ಕೆ ಮುಗಿಯಿತೆಂದು ಭಾವಿಸಬೇಡಿ , ಇದಾದನಂತರ ಸಂಪೂರ್ಣ ಜಾಮೀನಿಗೆ ಅಲೆಯಬೇಕು ನಂತರ ಕೋರ್ಟಿನಲ್ಲಿ ಕೇಸಿನ ವಿಚಾರಣೆ ಶುರುವಾಗುತ್ತದೆ ಇದು ಸುಮಾರು 5 ರಿಂದ 7 ವರ್ಷದವರೆಗೆ ನೆಡೆದು ಕೊನೆಗೆ ತೀರ್ಪು ಸಿಗುತ್ತದೆ. ಈ ಹೊತ್ತಿಗೆ ಸುಮಾರು 2 ರಿಂದ 5 ಲಕ್ಷ ವೆಚ್ಚವಾಗುವ ಸಂಭವ ಇದೆ.
ಈ ಕೇಸುಗಳ ಜೊತೆಗೆ ಬಹಳಷ್ಟು ಜನರಿಗೆ ಸಿವಿಲ್ ನ್ಯಾಯಾಲಯದಲ್ಲಿ ವಿಚ್ಚೇದನ ಕೇಸುಗಳು, Maintainance ಕೇಸುಗಳು, ಮಕ್ಕಳಿದ್ದರೆ ಚೈಲ್ಡ್ ಕಸ್ತೋಡಿ ಕೆಸುಗುಳು ಸಹ ನಡೆಯುತ್ತಿರುತ್ತದೆ. ಇವುಗಳು ಮತ್ತಿಷ್ಟು ಲಕ್ಷ ಕರ್ಚಾಗುತ್ತದೆ. ಇದೆಲ್ಲಕ್ಕಿಂತ ಹೆಚ್ಚಾದ ಕಿರುಕುಳವೆಂದರೆ ನ್ಯಾಯಾಲಯಕ್ಕೆ ಎಲ್ಲ ತಾರಿಕುಗಳಿಗೆ ಹಾಜರಾಗುವುದು. ಈ ರೀತಿಯ ಸಮಸ್ಯೆಗೆ ಒಬ್ಬ ಪುರುಷ ಹಾಗು ಅವನ ಕಡೆಯವರು ಒಳಗಾದಾಗ ಹಂತ ಹಂತದಲ್ಲೂ ಅವನನ್ನು ನಂಬುವವರು ಯಾರು ಇರುವುದಿಲ್ಲ. ಪೊಲೀಸರು, ನ್ಯಾಯಾಲಯ ಪುರುಷ ಮಾಡುವುದೆಲ್ಲ ಯಾವಾಗಲು ತಪ್ಪು ಮಹಿಳೆ ಅಬಲೇ ಅವಳಿಗೆ ರಕ್ಷಣೆ ಕೊಡಬೇಕು ಎನ್ನುವ ಕುರುಡು ಉತ್ಸಾಹದಲ್ಲಿ ಪುರುಷನ ಸತ್ಯದ ಬಗ್ಗೆ ಕಿಂಚಿತ್ತು ಶೋದನೆ ಮಾಡದೇ ಪುರುಷರನ್ನು ನಿಂದಿಸಿ ಬಲಿಪಶುಗಳನ್ನಾಗಿಸುತ್ತಿದೆ.
ಈ ಸಮಸ್ಯೆ ಅಪಾರ ರೂಪ ತಾಳಿ ಸಮಾಜವನ್ನು ಕಾಡತೊಡಗಿದೆ. 498A ಹಾಗು D.V ಕಾಯ್ದೆಯ ದುರುಪಯೋಗಕ್ಕೆ ವಳಗಾದವರನ್ನು ಸಮಾಜ ಸಂಶಯದಿಂದ ನೋಡುತ್ತದೆ , ಪೊಲೀಸರು ಕಿರುಕುಳ ನೀಡುತ್ತಾರೆ, ನ್ಯಾಯಾಲಯ ತನಿಕೆ ಹೆಸರಿನಲ್ಲಿ ತಾರೀಕಿನ ಮೇಲೆ ತಾರೀಕು ಹಾಕಿ ಪ್ರಾಣ ಹಿಂಡುತ್ತದೆ ಈ ಸಮಯದಲ್ಲಿ ಕೇಸನ್ನು ವಹಿಸಿದ ವಕೀಲರು ಕೇಸು ಮುಂದುವರಿಸಲು ಲಕ್ಷದ ಮೇಲೆ ಲಕ್ಷ ಫೀಸ್ ತೆಗೆದುಕೊಳ್ಳುತಾರೆ. ಈ ರೀತಿ ಒಬ್ಬ ಮನುಷ್ಯನನ್ನು ಮೂಲೆಗುಂಪು ಮಾಡಿದರೆ ಆತ ಯಾವ ರೀತಿಯ ಮಾನಸಿಕ ಸ್ಥಿತಿಗೂ ಹೋಗಬಹುದು, ಅವನಿಂದ ಊಹಿಸಲಾರದ ದುಶ್ಕ್ರುತ್ಯೆಗಳೂ ಸಂಬವಿಸಬಹುದು.
ಈ ತರಹದ ಸಮಸ್ಯೆ ಮನುಷ್ಯ ಎದುರಿಸುತ್ತಿರುವಾಗ ಅವನ ಸಹಾಯಕ್ಕಾಗೆ ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್ ಸಂಸ್ಥೆ ಹುಟ್ಟಿದೆ. ಕುಟುಂಬದ ಸಾಮರಸ್ಯವೆ ತಮ್ಮ ಗುರಿ ಎಂದು ಹೇಳುತ್ತಾ ತಮ್ಮ ಬಳಿ ೪೯೮ಆ ಹಾಗು ದ್ವ ಕಾಯ್ದೆಯ ದುರುಪಯೋಗದಿಂದ ಬಳಲಿ ಬೇಸತ್ತು ಬಂದ ಜನರಿಗೆ ಸಾಂತ್ವನ , ದೈರ್ಯ ಹಾಗು ಮಂದಿನ ದಾರಿ ತೋರಿಸುವ ಕೆಲಸ ಸೇವ್ ಇಂಡಿಯನ್ ಫ್ಯಾಮಿಲಿ ಸಂಸ್ಥೆಯ ಸ್ವಯಮ್ ಸೇವಕರು ಮಾಡುತ್ತಿದ್ದಾರೆ. ಪ್ರತೀ ರವಿವಾರ ಕಬ್ಬನ್ ಪರ್ಕಿನಲ್ಲಿರುವ ಪ್ರೆಸ್ ಕ್ಲಬ್ ಎದುರು ಸಂಸ್ಥೆ ಕೌನ್ಸೆಲ್ಲಿಂಗ್ ನೆಡಿಸುತ್ತದೆ. ಈ ಸಂಸ್ಥೆಗೆ ವಾರಕ್ಕೆ ೧೫ ರಿಂದ ೨೦ ಹೊಸ ಜನ ಸಹಾಯ ಕೇಳಿ ಬರುತ್ತಾರೆ. ಇವರಲ್ಲಿ ಕೆಲವರು ಕಾನೂನಿನ ದುರುಪಯೋಗದಿಂದ ನೊಂದು ಬಂದ ಗಂಡಂದಿರು, ಅತ್ತೆಯಂದಿರು , ಮಾವಂದಿರು , ಹುಡುಗನ ಅಣ್ಣ ತಮ್ಮಂದಿರು ಅಥವಾ ಅಕ್ಕ ತಂಗಿಯರು. ಎಲ್ಲರು ಬಂದಾಗ ಕೆಳುವುದೊಂದೇ ಪ್ರಶ್ನೆ ಕಾನೂನು ತಮನ್ನೇಕೆ ಇಷ್ಟು ಹಿಂಸಿಸುತ್ತಿದೆ? ಪುರುಷನ ಸಂಬಂದಿಕರಾಗಿದ್ದೆ ತಪ್ಪೇ ? ಅಮಾಯಕರಿಗೆ ತಮ್ಮ ರಕ್ಷಣೆಗೆ ಯಾವ ಹಕ್ಕು ಇಲ್ಲವೇ? ಪುರುಷನಿಗೆ ತನ್ನ ರಕ್ಷಣೆಗೋಸ್ಕರ ಯಾವ ಕಾನೂನು ಇಲ್ಲವೇ ?
page revision: 25, last edited: 25 Oct 2008 19:58





